ಶನಿವಾರ, ಜನವರಿ 2, 2016

ನಾ ನಿನಗೆ ಎನಿತು ಉಪಕಾರಿಯೊ...

ನಾ ನಿನಗೆ ಎನಿತು ಉಪಕಾರಿಯೊ
ಪ್ರಭುವೆ
ನಾ ನಿನಗೆ ಎನಿತು ಆಭಾರಿಯೊ

ಮೀನಿಗಿರುವಂತೆ ನದಿವಾರಿಯೊ
ಸಕಲ ಜೀವಿಗಳ ಉತ್ತಾರಿಯೊ

ನಿನ್ನ ಎಂದೆಂದೂ ನಾ ಮರೆಯೆನು
ನಿನ್ನ ನಾಮವ ನಾ ತೊರೆಯೆನು
ಅಂತರಂಗದಲಿ ಸದ್ಭಕ್ತಿ ತುಂಬಿ
ಸತತ ಧ್ಯಾನಿಸುವೆ ನಿನ್ನನ್ನೆ ನಂಬಿ

ಬಾನ ಬೆಳಕಿನ ಮೂಲವು ನೀನು
ಪ್ರಾಣದಳುಕಿಗೆ ಧೈರ್ಯದ ಭಾನು
ನಿನ್ನ ಕೃಪೆ ನಭದ ರವಿಚಂದ್ರ ತಾರೆ
ಗಾಳಿಯಾಡದು ಆಣತಿಯ ಮೀರೆ

ಕಣ್ಣ ಮುನ್ನೋಟ ಬೆಂಬಲವು ನೀನೆ
ಜೀವಜೀವದ ಹಂಬಲವು ನೀನೆ
ಚೇತನಾಚೇತನದ ಆಂತರ್ಯ ಭಾವ
ಲೋಕಜೀವದುಧೋ ಉಸಿರಾಟ ದೇವ

- ಡಾ|| ನಿಸಾರ್ ಅಹಮ್ಮದ್
ಸಂಗೀತ: ಪದ್ಮಚರಣ್
ಗಾಯನ: ರತ್ನಮಾಲಾ ಪ್ರಕಾಶ್ & ಸುರೇಖಾ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ