ನಾಡ ದೇವಿಯೆ ಕಂಡೆ
ನಿನ್ನ ಮಡಿಲಲ್ಲಿ
ಎಂಥ ದೃಶ್ಯ
ನೋವು ನಗೆಯ
ಸಮ್ಮಿಶ್ರದಲ್ಲಿ
ಎದೆ ಆಯಿತದಕೆ ವಶ್ಯ
ನಿನ್ನ ಮಡಿಲಲ್ಲಿ
ಎಂಥ ದೃಶ್ಯ
ನೋವು ನಗೆಯ
ಸಮ್ಮಿಶ್ರದಲ್ಲಿ
ಎದೆ ಆಯಿತದಕೆ ವಶ್ಯ
ಒಂದೆದೆಯ ಹಾಲ
ಕುಡಿದವರ ನಡುವೆ
ಎಷ್ಟೊಂದು ಭೇದ ತಾಯಿ
ಒಂದೆ ನೆಲದ
ರಸ ಹೀರಲೇನು
ಸಿಹಿ ಕಹಿಯ ರುಚಿಯ ಕಾಯಿ
ಕುಡಿದವರ ನಡುವೆ
ಎಷ್ಟೊಂದು ಭೇದ ತಾಯಿ
ಒಂದೆ ನೆಲದ
ರಸ ಹೀರಲೇನು
ಸಿಹಿ ಕಹಿಯ ರುಚಿಯ ಕಾಯಿ
ಕತ್ತಲಲ್ಲಿ ಕಂಗೆಟ್ಟು
ಎಡವಿ ತಡವರಿಸುತಿರಲು ಮಂದಿ
ಕಡೆಗಣಿಸುತವರ ನಡೆದಿರುವನೊಬ್ಬ
ಸ್ವಹಿತಕ್ಕೆ ಹಿಡಿದು ದೊಂದಿ
ಸಂಸ್ಕಾರವಿಲ್ಲ ಹೆಣಕೆಂದು
ತಲೆಗೆ ಕೈ ಹೊತ್ತ ಬಡವನೊಬ್ಬ
ಇನ್ನೊಬ್ಬ ತಾನು ಆಚರಿಸುತಿರುವ
ವೈಭವದ ಹುಟ್ಟು ಹಬ್ಬ
ಎಡವಿ ತಡವರಿಸುತಿರಲು ಮಂದಿ
ಕಡೆಗಣಿಸುತವರ ನಡೆದಿರುವನೊಬ್ಬ
ಸ್ವಹಿತಕ್ಕೆ ಹಿಡಿದು ದೊಂದಿ
ಸಂಸ್ಕಾರವಿಲ್ಲ ಹೆಣಕೆಂದು
ತಲೆಗೆ ಕೈ ಹೊತ್ತ ಬಡವನೊಬ್ಬ
ಇನ್ನೊಬ್ಬ ತಾನು ಆಚರಿಸುತಿರುವ
ವೈಭವದ ಹುಟ್ಟು ಹಬ್ಬ
ಅನ್ನವಿರದ ಹಸುಳೆಗಳ ತಬ್ಬಿ
ಅಳುತಿರುವ ತಾಯ ಕಂಡೆ
ದುಃಖ ಪೂರ ಉಕ್ಕುಕ್ಕಿ ಮೊರೆಯೆ
ಕೊಚ್ಚಿತ್ತು ಬಾಳ ದಂಡೆ
ಹೊಟ್ಟೆ ಹೇಡಿಗೆಯ ಬಿಚ್ಚಿ
ಅಳುತಿರುವ ತಾಯ ಕಂಡೆ
ದುಃಖ ಪೂರ ಉಕ್ಕುಕ್ಕಿ ಮೊರೆಯೆ
ಕೊಚ್ಚಿತ್ತು ಬಾಳ ದಂಡೆ
ಹೊಟ್ಟೆ ಹೇಡಿಗೆಯ ಬಿಚ್ಚಿ
ಹಸಿದ ಹಾವನ್ನು ಚುಚ್ಚಿ ಕೆಣಕಿ
ಯುಕ್ತ ರಾಗದಲಿ ಕುಣಿಸಿ ದಣಿಸಿ
ನಲಿದಿಹರು ಹಲರು ಬದುಕಿ
ಯುಕ್ತ ರಾಗದಲಿ ಕುಣಿಸಿ ದಣಿಸಿ
ನಲಿದಿಹರು ಹಲರು ಬದುಕಿ
ನರನನ್ನೆ ಗಾಳವಾಗಿಸುತ
ಬಾಳ ನೀರಲ್ಲಿ ನಲಿವ ನರಿಗೆ
ಸಾವೊಂದು ಎನುವ ಸತ್ಯಕ್ಕೆ
ಅಡ್ಡಗಾಲೆಳೆವ ನಾಡಿನರಿಗೆ
ಎಚ್ಚರವ ನೀಡಿ ತಿದ್ದುತ್ತಲಿರಲಿ
ಕವಿ ಭಾವವೆಂಬ ಬಡಿಗೆ
ತಾಯಿ ಭಾರತಿಯೆ ಇದುವೆ
ನಿನಗೆ ನಾ ಸಲಿಸಲಿರುವ ಕೊಡುಗೆ
ಬಾಳ ನೀರಲ್ಲಿ ನಲಿವ ನರಿಗೆ
ಸಾವೊಂದು ಎನುವ ಸತ್ಯಕ್ಕೆ
ಅಡ್ಡಗಾಲೆಳೆವ ನಾಡಿನರಿಗೆ
ಎಚ್ಚರವ ನೀಡಿ ತಿದ್ದುತ್ತಲಿರಲಿ
ಕವಿ ಭಾವವೆಂಬ ಬಡಿಗೆ
ತಾಯಿ ಭಾರತಿಯೆ ಇದುವೆ
ನಿನಗೆ ನಾ ಸಲಿಸಲಿರುವ ಕೊಡುಗೆ
- ಪ್ರೊ. ಕೆ.ಎಸ್. ನಿಸಾರ್ ಅಹಮದ್
ಸಂಗೀತ/ಗಾಯನ: ಮೈಸೂರು ಅನಂತಸ್ವಾಮಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ